ಸೂರಾ Al-Fatihah — The Opening

ಸೂರಾ Al-Fatihah (The Opening) — 1/114 · 7 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.

بِسۡمِ ٱللَّهِ ٱلرَّحۡمَٰنِ ٱلرَّحِيمِ

ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ

Ayah 1

ٱلۡحَمۡدُ لِلَّهِ رَبِّ ٱلۡعَٰلَمِينَ

ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ

Ayah 2

ٱلرَّحۡمَٰنِ ٱلرَّحِيمِ

ಅವನು ಅಪಾರ ದಯಾಳು, ಕರುಣಾಮಯಿ

Ayah 3

مَٰلِكِ يَوۡمِ ٱلدِّينِ

ಪ್ರತಿಫಲದ ದಿನದ ಮಾಲಕ

Ayah 4

إِيَّاكَ نَعۡبُدُ وَإِيَّاكَ نَسۡتَعِينُ

(ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ

Ayah 5

ٱهۡدِنَا ٱلصِّرَٰطَ ٱلۡمُسۡتَقِيمَ

ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು

Ayah 6

صِرَٰطَ ٱلَّذِينَ أَنۡعَمۡتَ عَلَيۡهِمۡ غَيۡرِ ٱلۡمَغۡضُوبِ عَلَيۡهِمۡ وَلَا ٱلضَّآلِّينَ

ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ

Ayah 7