ಸೂರಾ Ad-Dhuhaa — The Morning Hours
ಸೂರಾ Ad-Dhuhaa (The Morning Hours) — 93/114 · 11 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.
وَٱلضُّحَىٰ
ಬಿಸಿಲೇರುವ ಸಮಯದಾಣೆ
Ayah 1وَٱلَّيۡلِ إِذَا سَجَىٰ
ಇರುಳು ಆವರಿಸುವಾಗಿನಾಣೆ
Ayah 2مَا وَدَّعَكَ رَبُّكَ وَمَا قَلَىٰ
(ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ
Ayah 3وَلَلۡأٓخِرَةُ خَيۡرࣱ لَّكَ مِنَ ٱلۡأُولَىٰ
ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ
Ayah 4وَلَسَوۡفَ يُعۡطِيكَ رَبُّكَ فَتَرۡضَىٰٓ
ಶೀಘ್ರವೇ ನಿಮ್ಮೊಡೆಯನು, ನೀವು ಸಂತೃಪ್ತರಾಗುವಷ್ಟನ್ನು ನಿಮಗೆ ನೀಡುವನು
Ayah 5أَلَمۡ يَجِدۡكَ يَتِيمࣰ ا فَـَٔاوَىٰ
ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ ನೀಡಿರಲಿಲ್ಲವೇ
Ayah 6وَوَجَدَكَ ضَآلࣰّ ا فَهَدَىٰ
ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು ನಿಮಗೆ ದಾರಿ ತೋರಲಿಲ್ಲವೇ
Ayah 7وَوَجَدَكَ عَآئِلࣰ ا فَأَغۡنَىٰ
ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ
Ayah 8فَأَمَّا ٱلۡيَتِيمَ فَلَا تَقۡهَرۡ
ನೀವಿನ್ನು ಅನಾಥರನ್ನು ಗದರಿಸಬೇಡಿ
Ayah 9وَأَمَّا ٱلسَّآئِلَ فَلَا تَنۡهَرۡ
ಮತ್ತು ಬೇಡುವವನನ್ನು ಜರೆಯಬೇಡಿ
Ayah 10وَأَمَّا بِنِعۡمَةِ رَبِّكَ فَحَدِّثۡ
ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ) ವಿವರವಾಗಿ ತಿಳಿಸಿರಿ
Ayah 11