ಸೂರಾ Al-Masad — The Palm Fibre

ಸೂರಾ Al-Masad (The Palm Fibre) — 111/114 · 5 ಆಯತ್‌ಗಳು. ಅರೇಬಿಕ್ ಪಠ್ಯ ಮತ್ತು ಕನ್ನಡ ಅನುವಾದದೊಂದಿಗೆ ಓದಿ ಮತ್ತು ಕೇಳಿ.

تَبَّتۡ يَدَآ أَبِي لَهَبࣲ وَتَبَّ

ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು

Ayah 1

مَآ أَغۡنَىٰ عَنۡهُ مَالُهُۥ وَمَا كَسَبَ

ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ

Ayah 2

سَيَصۡلَىٰ نَارࣰ ا ذَاتَ لَهَبࣲ‏

ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು

Ayah 3

وَٱمۡرَأَتُهُۥ حَمَّالَةَ ٱلۡحَطَبِ

ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ

Ayah 4

فِي جِيدِهَا حَبۡلࣱ مِّن مَّسَدِۭ

ಅವಳ ಕೊರಳಲ್ಲಿ ಖರ್ಜೂರದೆಲೆಯ ಪಾಶವಿರುವುದು

Ayah 5